News Cafe | HR Ranganath Speaks About Noted Kannada Singer Shivamogga Subbanna | Aug 12, 2022

2022-08-12 0

ಖ್ಯಾತ ಗಾಯಕ, ವಕೀಲ ಶಿವಮೊಗ್ಗ ಸುಬ್ಬಣ್ಣ ಕಳೆದ ರಾತ್ರಿ ಹೃದಯಸ್ತಂಬನದಿಂದ ವಿಧಿವಶರಾಗಿದ್ದಾರೆ. ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ಅಂತ್ಯಕ್ರಿಯೆ ನಡೆಯಲಿದೆ. ಶಿವಮೊಗ್ಗ ಸುಬ್ಬಣ್ಣನವರ ಮಗ ಶ್ರೀರಂಗ ಮಾತಾಡಿ, ನಿನ್ನೆ ಸಂಜೆ ಸಂಜೆ ಐದರ ಸುಮಾರಿಗೆ ಹುಷಾರಿರಲಿಲ್ಲ. ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದ್ವಿ. ಅಲ್ಲಿಂದ ಜಯದೇವಕ್ಕೆ ಶಿಫ್ಟ್ ಮಾಡುವಷ್ಟರಲ್ಲಿ ಹೃದಯಘಾತವಾಯ್ತು ಅಂತ ಹೇಳಿದ್ರು. ಬೆಂಗಳೂರಿನಲ್ಲೇ ಇವತ್ತು ಅಂತ್ಯಕ್ರಿಯೆ ಮಾಡ್ತೇವೆ ಅಂತ ಶ್ರೀರಂಗ ತಿಳಿಸಿದ್ರು. ಕಾಡು ಕುದುರೆ ಸಿನಿಮಾದ `ಕಾಡು ಕುದುರೆ ಓಡಿಬಂದಿತ್ತಾ' ಹಾಡಿಗೆ 1979ರಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿದ್ರು. ಇದು ಹಿನ್ನೆಲೆ ಗಾಯನದಲ್ಲಿ ಕನ್ನಡಕ್ಕೆ ಒಲಿದ ಮೊದಲ ರಾಷ್ಟ್ರಪ್ರಶಸ್ತಿಯಾಗಿದೆ. ಇನ್ನು, ರಜತ ಕಮಲ, ಶಿಶುನಾಳ ಷರಿಫ್ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ನೋಟರಿ ಪಬ್ಲಿಕ್ ಅಲ್ಲೂ ಅಪಾರ ಸೇವೆ ಸಲ್ಲಿಸಿದ್ದ ಶಿವಮೊಗ್ಗ ಸುಬ್ಬಣ್ಣ ಗಾಯಕರಾಗಿ ಜೊತೆಗೆ ವಕೀಲರಾಗಿಯೂ ಸೇವೆ ಸಲ್ಲಿಸಿದ್ರು. ಗಾಯನ ಲೋಕದ ದಿಗ್ಗಜರು, ಗಣ್ಯರು ಸಂತಾಪ ಸೂಚಿಸಿದ್ದಾರೆ. ಓನನ್ನ ಚೇತನ.. ಆನಂದಮಯ ಈ ಜಗ ಹೃದಯ.. ಮೊದಲು ಮಾನವನಾಗು ಸೇರಿದಂತೆ ಹಲವಾರು ಜನಪ್ರಿಯ ಹಾಡುಗಳಿಗೆ ದನಿಯಾಗಿದ್ದಾರೆ. ಅವರ ಕಂಠಸಿರಿಯ ಸುಪ್ರಸಿದ್ಧ ಹಾಡುಗಳ ಝಲಕ್ ನೋಡೋಣ..

#publictv #newscafe #hrranganath